ಬಿ.ಇ.ಎಂ. ಶಾಲಾ ವಿದ್ಯಾರ್ಥಿಗಳಿಗೆ ಉಚಿತ ಪುಸ್ತಕ ವಿತರಣೆ

ಬಿ.ಇ.ಎಂ. ಶಾಲಾ ವಿದ್ಯಾರ್ಥಿಗಳಿಗೆ ಉಚಿತ ಪುಸ್ತಕ ವಿತರಣೆ

Written by BEM School

June 16, 2018

“ವೀರ ವೆಂಕಟೇಶ ಚಾರಿಟೇಬಲ್ ಟ್ರಸ್ಟ್“ ಕಾರ್‍ಸ್ಟ್ರೀಟ್, ಮಂಗಳೂರು ವತಿಯಿಂದ ಇತ್ತೀಚೆಗೆ ನಗರದ ಬಿ.ಇ.ಎಂ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಉಚಿತ ಪುಸ್ತಕ ವಿತರಣೆ ಗೈಯಲಾಯಿತು.

ಸಮಾರಂಭದಲ್ಲಿ ಬಿ.ಇ.ಎಂ. ವಿದ್ಯಾ ಸಂಸ್ಥೆಯ ಖಜಾಂಜಿ ಶ್ರೀ ಆಲ್ವಿನ್ ಮನೋಹರ್ ಆನಂದ್ ಅಧ್ಯಕ್ಷತೆ ವಹಿಸಿದ್ದರು. ವೀರ ವೆಂಕಟೇಶ ಟ್ರಸ್ಟ್ ಅಧ್ಯಕ್ಷರಾದ ಮಂಜುನಾಥ ಶೆಣೈ ಪುಸ್ತಕ ವಿರಿಸಿ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ಕಾರ್ಯಕ್ರಮದಲ್ಲಿ ವೀರ ವೆಂಕಟೇಶ ಚಾರಿಟೇಬಲ್ ಟ್ರಸ್ಟ್ ಕಾರ್ಯದರ್ಶಿ ಹಾಗೂ ಶಾಲಾ ಹಳೆವಿದ್ಯಾರ್ಥಿ ಜಯರಾಜ್ ಪೈ, ಪ್ರಬಂಧಕ ಮಾಧವ ಆಚಾರ್ಯ, ಬಿ.ಇ.ಎಂ. ಆಡಳಿತ ಮಂಡಳಿ ಸದಸ್ಯ ರೊನಾಲ್ಡ್ ಕರ್ಕಡ ಉಪಸ್ಥಿತರಿದ್ದರು.

ಶಾಲಾ ಮುಖ್ಯೋಪಾಧ್ಯಾಯ ಶ್ರೀ ಶಂಕರ್ ಕೆ.ಸಿ. ಸ್ವಾಗತಿಸಿ, ಶಿಕ್ಷಕಿ ಶ್ರೀಮತಿ ಸಂಧ್ಯಾಭಟ್ ನಿರೂಪಿಸಿ, ಶಿಕ್ಷಕ ಶ್ರೀಯುತ ಯಶವಂತ ಮಾಡ ವಂದಿಸಿದರು. ಸಂಸ್ಥೆಯ ಎಲ್ಲಾ ಶಿಕ್ಷಕ ಶಿಕ್ಷಕೇತರ ಸಿಬ್ಬಂದಿ ಉಪಸ್ಥಿತರಿದ್ದರು.

You May Also Like…

Honoured for 100% Results

Honoured for 100% Results

ಮುಖ್ಯ ಶಿಕ್ಷಕರ ಸಭೆಯಲ್ಲಿ 100% ಫಲಿತಾಂಶವನ್ನು ಪಡೆದ ನಮ್ಮ ಶಾಲೆಯನ್ನು ಗೌರವದಿಂದ ಸನ್ಮಾನಿಸಲಾಯಿತು ಸನ್ಮಾನ...