ಬಿ.ಇ.ಎಂ. ಹೈಸ್ಕೂಲ್ ಹಳೇ ವಿದ್ಯಾರ್ಥಿ ಸಂಘದ ಸಾಮಾನ್ಯ ಸಭೆಯು ತಾ| 12-08-2016ರಂದು ಶಾಲಾ ಸೆಂಟಿನರಿ ಹಾಲ್ನಲ್ಲಿ ಸಂಘದ ಅಧ್ಯಕ್ಷರಾದ ಶ್ರೀ ಎಂ. ಗಣೇಶ್ (ನಿವೃತ್ತ ಪೋಲೀಸ್ ಅಧಿಕಾರಿ)ಯವರ ಅಧ್ಯಕ್ಷತೆಯಲ್ಲಿ ಜರಗಿತು. ಅಂದಿನ ಸಭೆಯಲ್ಲಿ ಬಿ.ಇ.ಎಂ. ಪ್ರೌಢ ಶಾಲಾ ವಿಭಾಗದ ಆರ್ಥಿಕವಾಗಿ ಹಿಂದುಳಿದ ಬಡ ವಿದ್ಯಾರ್ಥಿಗಳಿಗೆ ಸಮವಸ್ತ್ರ ವನ್ನು ಬಿ.ಇ.ಎಂ. ಹೈಸ್ಕೂಲ್ನ ಹಳೇ ವಿದ್ಯಾರ್ಥಿ ಮೆ|| ಜನತಾ ಕನ್ಸ್ಟ್ರಕ್ಷನ್ ಹಾಗೂ ದೀಪಾ ಕಂಫರ್ಟ್ನ ಆಡಳಿತಾ ನಿರ್ದೇಶಕರಾದ ಮಾನ್ಯ ಶ್ರೀ ರಮೇಶ್ ಕುಮಾರ್ರವರ ವತಿಯಿಂದ ಸಂಘದ ಅಧ್ಯಕ್ಷರಾದ ಶ್ರೀ ಎಂ. ಗಣೇಶ್ರವರು ಶಾಲಾ ಸಂಚಾಲಕರಾದ ಶ್ರೀ ರೋಹನ್ ಮೈಕಲ್ ಶಿರಿಯವರಿಗೆ ಹಸ್ತಾಂತರಿಸಿದರು. ಅಂದಿನ ಸಾಮಾನ್ಯ ಸಭೆಯಲ್ಲಿ ಕಾರ್ಯದರ್ಶಿ ಜನಾಬ್ ಎ. ಎಂ. ರಫೀಯುದ್ಧೀನ್, ಕೋಶಾಧಿಕಾರಿ ಶ್ರೀ ಎಂ. ವಿಠಲ್ ಕುಡ್ವ ಹಾಗೂ ಸಂಘದ ಸದಸ್ಯರು ಉಪಸ್ಥಿತರಿದ್ದರು.
School Award
ಈ ದಿನ ನಡೆದಂತಹ 14ರ ವಯೋಮಿತಿಯ ಪ್ರಾಥಮಿಕ ಶಾಲೆಯ ಕ್ರೀಡಾಕೂಟದಲ್ಲಿ ನಮ್ಮ ಎಂಟನೇ ತರಗತಿಯ ವಿದ್ಯಾರ್ಥಿಗಳಾದ ಪ್ರೀತಮ್...