ರಕ್ಷಕ-ಉಪನ್ಯಾಸಕ ಸಂಘದ ವಾರ್ಷಿಕ ಮಹಾಸಭೆ – 2017-18

ರಕ್ಷಕ-ಉಪನ್ಯಾಸಕ ಸಂಘದ ವಾರ್ಷಿಕ ಮಹಾಸಭೆ - 2017-18

Written by BEM School

September 20, 2017

ಬಿ.ಇ.ಎಂ. ಅನುದಾನಿತ ಪದವಿ ಪೂರ್ವ ಕಾಲೇಜಿನ ರಕ್ಷಕ-ಉಪನ್ಯಾಸಕ ಸಂಘದ ವಾರ್ಷಿಕ ಮಹಾಸಭೆಯು ಆಡಳಿತ ಮಂಡಳಿಯ ಖಜಾಂಚಿ ಆಲ್ವಿನ್ ಆನಂದ್ ಅವರ ಅಧ್ಯಕ್ಷತೆಯಲ್ಲಿ ಜರಗಿತು.

ಕಟೀಲು ದೇವಳ ಪದವಿ ಪೂರ್ವ ಕಾಲೇಜಿನ ಹಿರಿಯ ರಾಜ್ಯಶಾಸ್ತ್ರ ಉಪನ್ಯಾಸಕಿ ಭಾರತಿ ಶೆಟ್ಟಿ ಅವರು ವಿದ್ಯಾರ್ಥಿಗಳ ಕಲಿಕೆಯ ಹಂತದಲ್ಲಿ ಹೆತ್ತವರ ಜವಬ್ದಾರಿ ವಿಷಯದ ಕುರಿತು ಉಪನ್ಯಾಸ ನೀಡಿದರು.

ಉಪನ್ಯಾಸಕಿ ಬಿಂದು ರಾಮಚಂದ್ರ ನೂತನ ಪದಾಧಿಕಾರಿಗಳ ಚುನಾವಣೆ ನಡೆಸಿಕೊಟ್ಟರು. ಬಿ.ಇ.ಎಂ. ಹಳೇ ವಿದ್ಯಾರ್ಥಿ ಸಂಘದ ಉಪಾಧ್ಯಕ್ಷ ಬಿ.ಪಿ. ಆಚಾರ್, ಕಾರ್ಯದರ್ಶಿ ಎ.ಎಂ. ರಫೀಯುದ್ಧೀನ್, ಜಂಟಿ ಕಾರ್ಯದರ್ಶಿ ವಿಜಯ ಕುಮಾರ್ ಉಪಸ್ಥಿತರಿದ್ದರು. ಪ್ರಾಂಶುಪಾಲ ರೋಶನ್ ಕುಮಾರ್ ಸ್ವಾಗತಿಸಿದರು. ಉಪನ್ಯಾಸಕಿ ಅಪರ್ಣ ಪ್ರವೀಣ್‍ಚಂದ್ರ ಅಯವ್ಯಯ ಪಟ್ಟಿ ಮಂಡಿಸಿದರು. ಉಪನ್ಯಾಸಕ ಐತಪ್ಪ ಯು. ಪ್ರಸ್ತಾವಿಕವಾಗಿ ಮಾತನಾಡಿದರು.

ಉಪನ್ಯಾಸಕ ವಾಸುದೇವ ನಾಯ್ಕ್ ವಂದಿಸಿದರು. ಉಪನ್ಯಾಸಕಿ ಸ್ವಪ್ನ ಕಾರ್ಯಕ್ರಮ ನಿರೂಪಿಸಿದರು.

You May Also Like…

School Award

School Award

ಈ ದಿನ ನಡೆದಂತಹ 14ರ ವಯೋಮಿತಿಯ ಪ್ರಾಥಮಿಕ ಶಾಲೆಯ ಕ್ರೀಡಾಕೂಟದಲ್ಲಿ ನಮ್ಮ ಎಂಟನೇ ತರಗತಿಯ ವಿದ್ಯಾರ್ಥಿಗಳಾದ ಪ್ರೀತಮ್...

Kabaddi Winners

Kabaddi Winners

ಈ ದಿನ ನಡೆದಂತಹ ಮಂಗಳೂರು ಹೋಬಳಿ ಮಟ್ಟದ 14ರ ವಯೋಮಾನದ ಬಾಲಕ ಬಾಲಕಿಯರ ಕಬಡ್ಡಿ ಪಂದ್ಯಾಟದಲ್ಲಿ ನಮ್ಮ ವಿದ್ಯಾ ಸಂಸ್ಥೆಯ...