ಬಿ.ಇ.ಎಂ. ಪ್ರೌಢ ಶಾಲೆಯ ಚಿತ್ರಕಲಾ ಶಿಕ್ಷಕ ಮಾಧವ ಅವರಿಗೆ ವಿದಾಯ ಕೂಟ

ಬಿ.ಇ.ಎಂ. ಪ್ರೌಢ ಶಾಲೆಯ ಚಿತ್ರಕಲಾ ಶಿಕ್ಷಕ ಮಾಧವ ಅವರಿಗೆ ವಿದಾಯ ಕೂಟ

Written by BEM School

December 14, 2017

ಬಿ.ಇ.ಎಂ. ಅನುದಾನಿತ ಪ್ರೌಢ ಶಾಲೆಯಲ್ಲಿ ಕಳೆದ 27 ವರ್ಷಗಳಿಂದ ಚಿತ್ರಕಲಾ ಶಿಕ್ಷಕರಾಗಿ ಸೇವೆಸಲ್ಲಿಸಿ ಇತ್ತೀಚೆಗೆ ನಿವೃತ್ತರಾದ ಮಾಧವ ಎಂ ಅವರಿಗೆ ಬಿ.ಇ.ಎಂ. ಸಮೂಹ ವಿದ್ಯಾಸಂಸ್ಥೆಯ ವತಿಯಿಂದ ವಿದಾಯಕೂಟ ನಡೆಸಲಾಯಿತು. ಸಂಸ್ಥೆಯ ಆಡಳಿತ ಮಂಡಳಿ ಖಜಾಂಚಿ ಶ್ರೀ ಆಲ್ವಿನ್ ಮನೋಹರ್ ಆನಂದ್ ಅಧ್ಯಕ್ಷತೆ ವಹಿಸಿದ್ದ ಸಮಾರಂಭದಲ್ಲಿ ಪ್ರೌಢ ಶಾಲಾ ಮುಖ್ಯಶಿಕ್ಷಕ ಶ್ರೀ ಶಂಕರ್ ಕೆ.ಸಿ., ಪ.ಪೂ. ಕಾಲೇಜಿನ ಪ್ರಾಂಶುಪಾಲ ಶ್ರೀ ರೋಶನ್ ಕುಮಾರ್, ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ ಫ್ರೀಡಾ ಮಾಬೆನ್, ಹೆಡ್ ಸ್ಟಾಟರ್ಸ್‍ನ ಮುಖ್ಯ ಶಿಕ್ಷಕಿ ಶ್ರೀಮತಿ ಅನಿತಾ ರಾವ್, ಹಳೇ ವಿದ್ಯಾರ್ಥಿಸಂಘದ ಕಾರ್ಯದರ್ಶಿ ಜನಾಬ್ ರಫೀಯುದ್ದೀನ್, ಶ್ರೀ ಪಿ.ಬಿ. ಆಚಾರ್, ಪ್ರೌಢ ಶಾಲಾ ಆಡಳಿತ ಮಂಡಳಿ ಉಸ್ತುವಾರಿ ಪ್ರತಿನಿಧಿ ಶ್ರೀ ರೊನಾಲ್ಡ್ ಕರ್ಕಡ ಮುಂತಾದ ಗಣ್ಯರು ಉಪಸ್ಥಿತರಿದ್ದರು. ಪ್ರಾಥಮಿಕ ಶಾಲೆ, ಪ್ರೌಢ ಶಾಲೆ, ಪ.ಪೂ ವಿಭಾಗ, ಹೆಡ್‍ಸ್ಟಾಟರ್, ಹಳೇ ವಿದ್ಯಾರ್ಥಿಸಂಘ, ಹಾಗೂ ಆಡಳಿತ ಮಂಡಳಿ ವತಿಯಿಂದ ನಿವೃತ್ತರನ್ನು ಪ್ರತ್ಯೇಕವಾಗಿ ಅಭಿನಂದಿಸಲಾಯಿತು.

ಪ್ರೌಢಶಾಲಾ ಮುಖ್ಯ ಶಿಕ್ಷಕ ಶ್ರೀ ಶಂಕರ್ ಕೆ.ಸಿ. ಸ್ವಾಗತಿಸಿ, ಶಿಕ್ಷಕಿ ಶ್ರೀಮತಿ ಸಂಧ್ಯಾ ಭಟ್ ನಿರೂಪಿಸಿದರು. ದೈಹಿಕ ಶಿಕ್ಷಕ ಶ್ರೀ ಯಶವಂತ ಮಾಡ ವಂದಿಸಿದರು.

You May Also Like…