ಬಿ.ಇ.ಎಂ. ಅನುದಾನಿತ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳ ಪ್ರತಿಭಾ ದಿನಾಚರಣೆಯನ್ನು ಕಾಲೇಜಿನ ಸೆಂಟಿನರಿ ಸಭಾಭವನದಲ್ಲಿ ನಡೆಸಲಾಯಿತು. ಮುಖ್ಯ ಅತಿಥಿಯಾಗಿದ್ದ ಉದ್ಯಮಿ ಜನಾರ್ಧನ್ ಕುಡ್ವ ಮಾತನಾಡಿ “ಯುವ ಪ್ರತಿಭೆಗಳು ತಮ್ಮ ಕನಸುಗಳನ್ನು ನನಸಾಗಿಸುವ ದಿಶೆಯಲ್ಲಿ ಗಮನವನ್ನು ಕೇಂದ್ರಿಕರಿಸಿ ಯಶಸ್ವಿಗಳಾಗಬೇಕು” ಎಂದು ಹೇಳಿದರು. ಬಿ.ಇ.ಎಂ. ಹಳೇ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಎ.ಎಂ. ರಫೀಯುದ್ಧೀನ್, ನ್ಯಾಯವಾದಿ ವಿಠಲ್ ಕುಡ್ವ, ಉದ್ಯಮಿ ವಿಜಯಕುಮಾರ್ ಉಪಸ್ಥಿತರಿದ್ದರು. ಪ್ರಾಂಶುಪಾಲ ರೋಶನ್ ಕುಮಾರ್ ಸ್ವಾಗತಿಸಿದರು. ರಾಜ್ಯಶಾಸ್ತ್ರ ಉಪನ್ಯಾಸಕಿ ಸ್ವಪ್ನ ಕಾರ್ಯಕ್ರಮ ನಿರೂಪಿಸಿದರು. ವಿಜೇತರ ಹೆಸರಿನ ಪಟ್ಟಿಯನ್ನು ವಾಣಿಜ್ಯಶಾಸ್ತ್ರ ಉಪನ್ಯಾಸಕಿ ಅಪರ್ಣ ಪ್ರವೀಣ್‍ಚಂದ್ರ ವಾಚಿಸಿದರು. ಸಮಾಜಶಾಸ್ತ್ರ ಉಪನ್ಯಾಸಕಿ ಬಿಂದು ರಾಮಚಂದ್ರ ವಂದಿಸಿದರು.
ತಾಲೂಕು ಮಟ್ಟಕ್ಕೆ ಆಯ್ಕೆಯಾದ BEM ವಿದ್ಯಾರ್ಥಿಗಳು
ಪ್ರೌಢಶಾಲಾ ವಿಭಾಗದ ಕ್ರೀಡಾಕೂಟದಲ್ಲಿ ಪ್ರಶಸ್ತಿಯನ್ನು ಗೆದ್ದು ತಾಲೂಕು ಮಟ್ಟಕ್ಕೆ ಆಯ್ಕೆಯಾದ BEM ವಿದ್ಯಾರ್ಥಿಗಳು....