ಬಿ.ಇ.ಎಂ. ಅನುದಾನಿತ ವಿದ್ಯಾ ಸಂಸ್ಥೆ: ವಿದ್ಯಾರ್ಥಿ ಸಂಘ ಉದ್ಘಾಟನೆ

“ವಿದ್ಯಾರ್ಥಿದೆಸೆಯಲ್ಲೇ ನಾಯಕತ್ವ ಗುಣ ರೂಢಿಸಿಕೊಳ್ಳಿ”

ವಿದ್ಯಾರ್ಥಿ ದೆಸೆಯಲ್ಲೇ ನಾಯಕತ್ವ ಗುಣ ರೂಢಿಸಿ ಕೊಳ್ಳಬೇಕು. ದೇಶದ ಮಹಾನ್ ವ್ಯಕ್ತಿಗಳ ಜೀವನ ಗಾಥೆಯನ್ನು ಓದಿ ತಿಳಿದು ಅವರಂತೆ ಮಹತ್ತರ ಸಾಧನೆ ಮಾಡುವ ಛಲ ಹೊಂದಬೇಕು ಎಂದು ಶಾಸಕ ವೇದವ್ಯಾಸ ಕಾಮತ್ ಹೇಳಿದರು.

ಬಿ.ಇ.ಎಂ. ಅನುದಾನಿತ ಪದವಿ ಪೂರ್ವ ಕಾಲೇಜು ಶಾಲೆ, ಬಿ.ಇ.ಎಂ. ಅನುದಾನಿತ ಪ್ರೌಢಶಾಲೆಗಳ ವಿದ್ಯಾರ್ಥಿ ಸಂಘ ಉದ್ಘಾಟಿಸಿ ಮಾತನಾಡಿದ ಅವರು, 180 ವರ್ಷಗಳ ಇತಿಹಾಸ ಹೊಂದಿರುವ ಬಿ.ಇ.ಎಂ. ಸಮೂಹ ವಿದ್ಯಾ ಸಂಸ್ಥೆಯ ಕಾರ್ಯಕ್ರಮದಲ್ಲಿ ಭಾಗವಹಿಸುವುದು ಹೆಮ್ಮೆ ಎನಿಸುತ್ತಿದೆ. ಸಂಸ್ಥೆಯ ಅಭಿವೃದ್ಧಿಗೆ ಶಾಸಕನಾಗಿ ಸಂಸ್ಥೆಯೊಂದಿಗೆ ಕೈಜೋಡಿಸಲು ಸದಾ ಸಿದ್ಧ ಎಂದವರು ಭರವಸೆ ನೀಡಿದರು.

ಸತ್ಪ್ರಜೆಗಳಾಗಿ

ಮುಖ್ಯ ಅತಿಥಿ ಚಲನಚಿತ್ರ, ರಂಗಭೂಮಿ ನಟ, ನಿರ್ದೇಶಕ ಕಾಸರಗೋಡು ಚಿನ್ನಾ ಮಾತನಾಡಿ, ಅಧ್ಯಾಪಕರಿಗೆ, ಹೆತ್ತವರಿಗೆ ವಿಧೇಯರಾಗಿ, ಸತ್ಪ್ರಜೆಯಾಗಿ ಬದುಕನ್ನು ಕಟ್ಟಿಕೊಳ್ಳಬೇಕು. ಮೊಬೈಲ್, ವಾಟ್ಸಪ್ ಪ್ರಭಾವಗಳಿಂದ ದೂರ ಇದ್ದು ಕಲಿಕೆಗೆ ತಮ್ಮನ್ನು ತಾವು ಸಮರ್ಪಿಸಿಕೊಳ್ಳಬೇಕು ಎಂದರು.

ವಿದ್ಯಾಸಂಸ್ಥೆಯ ಆಡಳಿತ ಮಂಡಳಿ ಅಧ್ಯಕ್ಷ ಜಯಪ್ರಕಾಶ್ ಸೈಮನ್ಸ್ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಕಾರ್ಪೋರೇಟರ್ ರಾಜೇಂದ್ರಕುಮಾರ್, ಶಾಲಾ ಸಂಚಾಲಕ ರೋಹನ್ ಎಂ. ಶಿರಿ, ಖಜಾಂಚಿ ಆಲ್ವಿನ್ ಮನೋಹರ್ ಆನಂದ್, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ವಿಜಯಕುಮಾಋ, ಖಜಾಂಚಿ ವಿಟ್ಟಲ ಕುಡ್ವ, ಬಿ.ಇ.ಎಂ. ಪ್ರೌಢಶಾಲಾ ಕನ್ನಡ ಮಾಧ್ಯಮ ಅಭಿವೃದ್ಧಿ ಸಮಿತಿ ಅಧಕ್ಷೆ ವೀಣಾ, ಬಿ.ಇ.ಎಂ. ಪದವಿಪೂರ್ವ ಕಾಲೇಜು ಹಿರಿಯ ಉಪನ್ಯಾಸಕಿ ಬಿಂದೂ ರಾಮಚಂದ್ರ, ಪ್ರೌಢಶಾಲಾ ಮುಖ್ಯ ಶಿಕ್ಷಕ ಶಂಕರ್ ಕೆ.ಸಿ., ಕಿರಿಯ ಪ್ರಾಥಮಿಕ ಶಾಲಾಮುಖ್ಯ ಶಿಕ್ಷಕಿ ಫ್ರೀಡಾ ಮಾಬೆನ್, ಮೋಗ್ಲಿಂಗ್ ಆಂಗ್ಲ ಶಾಲಾ ಮುಖ್ಯ ಶಿಕ್ಷಕಿ ಅನಿತಾ ರಾವ್ ಉಪಸ್ಥಿತರಿದ್ದರು.
ಪ್ರೌಢಶಾಲಾ ಮುಖ್ಯ ಶಿಕ್ಷಕಿ ಶಂಕರ್ ಕೆ. ಸಿ. ಸ್ವಾಗತಿಸಿ, ಉಪನ್ಯಾಸಕಿ ಸ್ವಪ್ನಾ ಮನೀಶ್ ನಿರೂಪಿಸಿದರು. ಶಿಕ್ಷಕಿಶಿಲ್ಪಶ್ರೀ ವಂದಿಸಿದರು. ಉಪನ್ಯಾಸಕಿ ಬಿಂದೂ ರಾಮಚಂದ್ರ ಪ್ರತಿಜ್ಞಾ ವಿಧಿ ಬೋಧಿಸಿದರು.

ಸಮ್ಮಾನ
ಈ ಸಂದರ್ಭ ಶಾಸಕ ವೇದವ್ಯಾಸಕಾಮತ್, ಚಿತ್ರನಟ ಕಾಸರಗೋಡು ಚಿನ್ನಾ ಅವರನ್ನು ಸಂಸ್ಥೆಯ ವತಿಯಿಂದ ಸನ್ಮಾನಿಸಲಾಯಿತು.